ನಿಮ್ಮ ಲೈಬ್ರರಿಯಲ್ಲಿ ಯಾವುದೇ ಪುಸ್ತಕವಿಲ್ಲದಿದ್ದರೆ ಮೊದಲ ಪುಟ ಈ ರೀತಿಯಾಗಿ ಕಾಣುತ್ತದೆ. "ಸಹಾಯ" ಗುಂಡಿಯ ಮೇಲೆ ತಟ್ಟಿದರೆ ಈ ಪುಟಕ್ಕೆ ಬರುತ್ತದೆ. ಪುಸ್ತಕ ಖರೀದಿಸಲು "store" ಅಥವಾ "ಅಂಗಡಿ" ಗುಂಡಿಯ ಮೇಲೆ ತಟ್ಟಿ.
ಪುಸ್ತಕಗಳನ್ನು ಖರೀದಿಸಲು ಇಲ್ಲಿ ಎರಡು ಆಯ್ಕೆಗಳಿವೆ. ಮೊದಲ ಆಯ್ಕೆಯಲ್ಲಿ ಖರೀದಿಸಿದ ಪುಸ್ತಕ ಭಾರತ ಉಪಖಂಡದಲ್ಲಿ ಮಾತ್ರ ಕೇಳಲು ಲಭ್ಯವಿರುತ್ತದೆ. ವಿಶ್ವ ವಿಭಾಗದಲ್ಲಿ ಕೊಂಡ ಪುಸ್ತಕವು ವಿಶ್ವಭಾರತವೂ ಸೇರಿದಂತೆ ವಿಶ್ವದೆಲ್ಲೆಡೆ ಕೇಳಲು ಲಭ್ಯವಿರುತ್ತದೆ. ವಿಶ್ವಮಟ್ಟದ ಪುಸ್ತಕಗಳನ್ನು ಅಮೇರಿಕನ್ ಡಾಲರ್ ಗಳ ವಿನಿಮಯದಲ್ಲಿ ಖರೀದಿಸಲು ಅವಕಾಶವಿರುತ್ತದೆ.
ಭಾರತ ಉಪಖಂಡದ ಖರೀದಿ ಪುಟ ಈ ರೀತಿಯಾಗಿ ಕಾಣುತ್ತದೆ. ಇಂಡಿಯನ್ ರೂಪಾಯಿಗಳಲ್ಲಿ ಪುಸ್ತಕದ ಮುಖ ಬೆಲೆ ಇರುತ್ತದೆ. ನಿಮಗೆ ಬೇಕಾದ ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡು ಕಾರ್ಟ್ ಗಳಲ್ಲಿ ತುಂಬಿಕೊಂಡು ಖರೀದಿಸಬಹುದು.
ಖರೀದಿ ಮಾಡುವಾಗ ದಯವಿಟ್ಟು ನಿಮ್ಮ ಸರಿಯಾದ ಇಮೇಲ್ ಐಡಿ ಮತ್ತು ಫೋನ್ ನಂಬರನ್ನು ಖಾತರಿ ಪಡಿಸಿಕೊಳ್ಳಿ. ತಪ್ಪಾದ ಐಡಿ ಅಥವಾ ನಂಬರ್ ನಿಂದ ನಿಮಗೆ ಆಕ್ಸೆಸ್ ಕೋಡ್ ತಲುಪದಿರಬಹುದು.
ಪುಸ್ತಕ ಖರೀದಿಸಿದ ೨೪ ಗಂಟೆಗಳೊಳಗಾಗಿ ನಿಮ್ಮ ಇಮೇಲ್ ಗೆ ಮತ್ತು ನಿಮ್ಮ ಫೋನ್ ಗೆ ಹನ್ನೆರಡು ಅಕ್ಷರ ಅಂಕಿಗಳ "ಆಕ್ಸೆಸ್ ಕೋಡ್" (Access Code) ಬಂದಿರುತ್ತದೆ.
ಅಂತರರಾಷ್ಟ್ರೀಯ ಖರೀದಿದಾರರಿಗೆ ಮೇಲ್ ಮಾತ್ರ ಬಂದಿರುತ್ತದೆ. ನಿಮ್ಮ ಇಂಬಾಕ್ಸ್ ನಲ್ಲಿ ಮೇಲ್ ಕಾಣದಿದ್ದರೆ ಒಮ್ಮೆ "ಸ್ಪ್ಯಾಮ್ " ಫೋಲ್ಡರ್ ಗೆ ಹೋಗಿ ನೋಡಬಹುದು. ನಿಮ್ಮ ಮೇಲ್ ಮತ್ತು ಮೊಬೈಲ್ ಗೆ ಆಕ್ಸೆಸ್ ಕೋಡ್ ಕಳಿಸುವುದರಿಂದ ನೀವು ಖರೀದಿ ಮಾಡುವಾಗ ಸರಿಯಾದ
ಮೇಲ್ ಐಡಿ ಮತ್ತು ದೂರವಾಣಿ ಸಂಖ್ಯೆಯನ್ನು ಕೊಟ್ಟಿದ್ದೀರಿ ಎಂಬುದನ್ನು ದಯವಿಟ್ಟು ಖಾತರಿ ಪಡಿಸಿಕೊಳ್ಳಿ. ಇಪ್ಪತ್ನಾಲ್ಕು ಗಂಟೆಯೊಳಗೆ ನಿಮಗೆ ಆಕ್ಸೆಸ್ ಕೋಡ್ ಬರದಿದ್ದರೆ ನಮ್ಮನ್ನು ಸಂಪರ್ಕಿಸಿ.
ಆಕ್ಸೆಸ್ ಕೋಡ್ ನಮೂದಿಸುವುದು ಮೊದಲ ಖರೀದಿಗೆ ಮಾತ್ರ ಅನ್ವಯವಾಗುತ್ತದೆ. ನಂತರದಲ್ಲಿ ಖರೀದಿಸುವ ಯಾವುದೇ ಪುಸ್ತಕಕ್ಕೆ ಆಕ್ಸೆಸ್ ಕೋಡ್ ಬೇಕಿರುವುದಿಲ್ಲ. ಖರೀಸಿದ ಇಪ್ತ್ನಾಲ್ಕು ಗಂಟೆಯೊಳಗಾಗಿ ಹೊಸ ಪುಸ್ತಕ ನಿಮ್ಮ ಲೈಬ್ರರಿಯನ್ನು ಸೇರಿರುತ್ತದೆ.
ಆಕ್ಸೆಸ್ ಕೋಡ್ ಅನ್ನು ಹೊತ್ತ ಮೇಲ್ activation@aalisiri.com ದಿಂದಲೂ ಎಸ್ ಎಮ್ ಎಸ್ HP-ALSIRI ದಿಂದಲೂ ಬಂದಿರುತ್ತದೆ.ಕೋಡ್ ಅನ್ನು ಕಾಪಿ ಮಾಡಿಕೊಂಡು ನಮ್ಮ "ಆಲಿಸಿರಿ" ಆಪ್ ಗೆ ಹೋಗಿ "Enter Code" ಎಂದು ಇರುವಲ್ಲಿ ಎರಡು ಗಳಿಗೆಗಳ ಕಾಲ ಪರದೆಯನ್ನು ಒತ್ತಿ ಹಿಡಿಯಿರಿ. ಆಗ "paste" ಎಂಬ ಪದ ಕಾಣುತ್ತದೆ.
ಆ ಪದದ ಮೇಲೆ ತಟ್ಟಿದರೆ ಕೋಡ್ ಅಂಟುತ್ತದೆ. ನಂತರ submit ಗುಂಡಿಯನ್ನು ತಟ್ಟಿದರೆ ತಕ್ಷಣವೇ ನೀವು ಖರೀದಿಸಿದ ಪುಸ್ತಕಗಳು ಕಾಣುತ್ತವೆ.
ನೀವು ಖರೀದಿಸಿದ ಪುಸ್ತಕಗಳ ಪಟ್ಟಿಯನ್ನು ನೀವು ನೋಡಬಹುದು. ಪುಸ್ತಕದ ಮೇಲೆ ತಟ್ಟಿದರೆ ಪುಸ್ತಕದಲ್ಲಿನ ಅಧ್ಯಾಯಗಳು ತೆರೆದುಕೊಳ್ಳುತ್ತವೆ. ಅಧ್ಯಾಯಗಳ ಮೇಲೆ ತಟ್ಟಿದರೆ ಆಯಾ ಆದ್ಯಾಯವನ್ನು ನಮ್ಮ ಆಪ್ ಓದಲು ಆರಂಭಿಸುತ್ತದೆ.